ಇಲ್ಲಿ ಎಲ್ಲ ಅಡುಗೆಗಳನ್ನು ಇಲ್ಲಿಯೇ ತಯಾರು ಮಾಡಲಾಗುತ್ತದೆ. ಹೊರಗಡೆ ಎಲ್ಲೋ ಸಿದ್ದಪಡಿಸುವ ಸಂಪ್ರದಾಯ ಇಲ್ಲವೇ ಇಲ್ಲ. ಬಿಸಿಬಿಸಿ ಮುದ್ದೆ ಊಟ ಇಲ್ಲಿ ತುಂಬಾ ಪ್ರಸಿದ್ಧಿ. ಇದರ ಜತೆಗೆ ನಾಟಿ ಚಿಕನ್ ಕರಿ, ಕೈಮಾ ಉಂಡೆ, ಮಟನ್ ಲಿವರ್ ಫ್ರೈ, ಮಟನ್ ಫ್ರೈಗೆ ತುಂಬಾ ಬೇಡಿಕೆ. ಬಿರಿಯಾನಿ ಮತ್ತು ಕಬಾಬ್‌ಗೆ ಹೆಚ್ಚು ಬೇಡಿಕೆ. ಇಲ್ಲಿ ಒಮ್ಮೆ ಕೈಮಾ ಉಂಡೆ ಮತ್ತು ಮುದ್ದೆ ಊಟ ತಿಂದರೆ ಅದನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಇಲ್ಲಿನ ಊಟದ ರುಚಿಯನ್ನು ಸವಿದವರು ಕಾಯಂ ಗಿರಾಕಿಗಳಾಗಿ ಬಿಡುತ್ತಾರೆ. ವಿಭಿನ್ನ ರುಚಿಯಲ್ಲಿ ತಯಾರಿಸಲಾದ ಲಿವರ್ ಫ್ರೈ ಮತ್ತು ಚಿಕನ್ ಫ್ರೈ ರುಚಿಗೆ ಮನಸೋಲದವರಿಲ್ಲ. ಬಿರಿಯಾನಿ ಬಾಯಲ್ಲಿಟ್ಟರೆ ಕರಗಿ ಹೋಗುತ್ತದೆಯೇನೋ ಎಂಬ ರುಚಿ ನೀಡುತ್ತದೆ.